1

1 ಕ್ರಿಸ್ತನ ಯೇಸುವಿನಲ್ಲಿರುವ ಜೀವ ವಾಗ್ದಾನದ ಪ್ರಕಾರ ದೇವರ ಚಿತ್ತದಿಂದ ಯೇಸು ಕ್ರಿಸ್ತನ ಅಪೊಸ್ತಲನಾದ ಪೌಲನೆಂಬ ನಾನು 2 ನನ್ನ ಅತಿ ಪ್ರಿಯಕುಮಾರನಾದ ತಿಮೊಥೆಯನಿಗೆ ತಂದೆಯಾದ ದೇವರಿಂದಲೂ ನಮ್ಮ ಕರ್ತನಾದ ಯೇಸು ಕ್ರಿಸ್ತನಿಂದಲೂ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ. 3 ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ಜ್ಞಾಪಕ ಮಾಡುತ್ತೇನೆ. ಇದಲ್ಲದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ನಾನು ನನ್ನ ಪೂರ್ವಿಕ ರನ್ನು ಅನುಸರಿಸಿ ದೇವರನ್ನು ಸೇವಿಸಿ ಸ್ತೋತ್ರ ಸಲ್ಲಿಸು ತ್ತೇನೆ. 4 ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು ನಿನ್ನನ್ನು ನೋಡಿ ಸಂತೋಷಭರಿತನಾಗಬೇಕೆಂದು ಬಹಳವಾಗಿ ಅಪೇಕ್ಷಿಸುತ್ತೇನೆ; 5 ನಿನ್ನಲ್ಲಿರುವ ನಿಷ್ಕಪಟ ವಾದ ನಂಬಿಕೆಯು ನನ್ನ ನೆನಪಿಗೆ ಬಂತು. ಆ ನಂಬಿಕೆಯು ಮೊದಲು ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನೀಕೆಯಲ್ಲಿಯೂ ವಾಸವಾಗಿತ್ತು: ಹಾಗೆಯೇ ಅದು ನಿನ್ನಲ್ಲಿಯೂ ವಾಸವಾಗಿದೆ ಎಂದು ನಾನು ದೃಢವಾಗಿ ನಂಬಿದ್ದೇನೆ. 6 ಆದಕಾರಣ ನಾನು ನಿನಗೆ ಹಸ್ತಾರ್ಪಣ ಮಾಡು ವದರ ಮೂಲಕ ನಿನಗೆ ದೊರಕಿದ ದೇವರ ವರವು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಕ ಮಾಡುತ್ತೇನೆ. 7 ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಸ್ವಸ್ಥಬುದ್ಧಿಯ ಆತ್ಮವೇ ಹೊರತು ಭಯದ ಆತ್ಮವಲ್ಲ. 8 ಹೀಗಿರುವದರಿಂದ ನಮ್ಮ ಕರ್ತನ ಸಾಕ್ಷಿಯ ವಿಷಯದಲ್ಲಿಯೂ ಆತನ ಸೆರೆಯವನಾದ ನನ್ನ ವಿಷಯದಲ್ಲಿಯೂ ನೀನು ನಾಚಿಕೆಪಡದೆ ದೇವರ ಬಲಕ್ಕನು ಸಾರವಾಗಿ ಸುವಾರ್ತೆಯ ನಿಮಿತ್ತ ಉಂಟಾಗುವ ಶ್ರಮೆಗಳಲ್ಲಿ ಪಾಲುಗಾರನಾಗಿರು. 9 ಆತನು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತನ್ನ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಕರೆಯಿಂದ ನಮ್ಮನ್ನು ಕರೆದನು. ಆತನು ಜಗದುತ್ಪತ್ತಿಗೆ ಮುಂಚೆಯೇ ಆ ಕೃಪೆಯನ್ನು ಕ್ರಿಸ್ತ ಯೇಸುವಿನಲ್ಲಿ ನಮಗೆ ಅನುಗ್ರಹಿಸಿದನು. 10 ಈಗ ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಪ್ರತ್ಯಕ್ಷತೆಯ ಮೂಲಕ ಅದನ್ನು ಪ್ರಕಾಶ ಪಡಿಸಿದ್ದಾನೆ. ಈತನು ಮರಣವನ್ನು ನಿವೃತ್ತಿ ಮಾಡಿ ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವ ವನ್ನೂ ಪ್ರಕಾಶಗೊಳಿಸಿದನು. 11 ಅದಕ್ಕೋಸ್ಕರ ನಾನು ಸಾರುವವನಾಗಿಯೂ ಅಪೊಸ್ತಲನಾಗಿಯೂ ಅನ್ಯಜನ ರಿಗೆ ಉಪದೇಶಕನಾಗಿಯೂ ನೇಮಿಸಲ್ಪಟ್ಟೆನು. 12 ಇದರ ನಿಮಿತ್ತದಿಂದಲೇ ಈ ಶ್ರಮೆಗಳನ್ನು ಅನುಭವಿಸುತ್ತಾ ಇದ್ದೇನೆ; ಆದರೂ ನಾನು ನಾಚಿಕೆಪಡುವದಿಲ್ಲ; ಯಾಕಂ ದರೆ ನಾನು ನಂಬಿರುವಾತನನ್ನು ಬಲ್ಲೆನು, ನಾನು ಆತನಿಗೆ ಒಪ್ಪಿಸಿದ್ದನ್ನು ಆತನು ಆ ದಿನಕ್ಕಾಗಿ ಕಾಪಾಡು ವದಕ್ಕೆ ಶಕ್ತನಾಗಿದ್ದಾನೆಂದೂ ದೃಢವಾಗಿ ನಂಬಿದ್ದೇನೆ. 13 ನೀನು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಸ್ವಸ್ಥ ವಾಕ್ಯಗಳ ಕ್ರಮವನ್ನು ಬಿಗಿಯಾಗಿ ಹಿಡಿದುಕೋ. 14 ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ನಿನಗೆ ಒಪ್ಪಿಸಲ್ಪಟ್ಟ ಆ ಒಳ್ಳೇದನ್ನು ನೀನು ಕಾಪಾಡು. 15 ಆಸ್ಯ ಸೀಮೆಯಲ್ಲಿರುವವರೆಲ್ಲರೂ ನನ್ನನ್ನು ಬಿಟ್ಟು ಹೋದರೆಂಬದನ್ನು ನೀನು ಬಲ್ಲೆ; ಅವರಲ್ಲಿ ಫುಗೇಲನೂ ಹೆರ್ಮೊಗೇನನೂ ಸೇರಿದ್ದಾರೆ. 16 ಒನೇಸಿಫೊರನ ಮನೆಯವರಿಗೆ ಕರ್ತನು ಕರುಣೆಯನ್ನು ತೋರಿಸಲಿ. ಯಾಕಂದರೆ ಅವನು ಅನೇಕಾ ವರ್ತಿ ನನ್ನನ್ನು ಉತ್ತೇಜನ ಪಡಿಸಿದನು. ನನ್ನ ಬೇಡಿಗಳಿಗೆ ನಾಚಿಕೆಪಡಲಿಲ್ಲ. 17 ಆದರೆ ಅವನು ರೋಮ್‌ನಲ್ಲಿ ದ್ದಾಗ ಬಹಳ ಶ್ರದ್ಧೆಯಿಂದ ನನ್ನನ್ನು ಹುಡುಕಿ ಕಂಡು ಕೊಂಡನು. 18 ಅವನು ಆ ದಿನದಲ್ಲಿ ಕರ್ತನ ಕರುಣೆ ಯನ್ನು ಕಂಡುಕೊಳ್ಳುವಂತೆ ಕರ್ತನು ಅವನಿಗೆ ದಯ ಪಾಲಿಸಲಿ. ಎಫೆಸದಲ್ಲಿ ನನಗೆ ಎಷ್ಟೋ ಉಪಚಾರ ಮಾಡಿದನೆಂಬದು ನಿನಗೆ ಚೆನ್ನಾಗಿ ಗೊತ್ತಿದೆ.

2

1 ಆದದರಿಂದ ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಲ್ಲಿ ಬಲ ವಾಗಿರು. 2 ಅನೇಕ ಸಾಕ್ಷಿಗಳ ಮುಂದೆ ನೀನು ನನ್ನಿಂದ ಕೇಳಿದವುಗಳನ್ನೇ ಇತರರಿಗೆ ಸಹ ಬೋಧಿಸ ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು. 3 ಆದದರಿಂದ ನೀನು ಯೇಸು ಕ್ರಿಸ್ತನ ಒಳ್ಳೇ ಸೈನಿಕನಂತೆ ಶ್ರಮೆಯನ್ನ ನುಭವಿಸು. 4 ಯುದ್ಧಕ್ಕೆ ಹೋಗುವವನು ಈ ಜೀವನದ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನಿಕನನ್ನಾಗಿ ಆರಿಸಿಕೊಂಡವನನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡು ತ್ತಾನೆ. 5 ಇದಲ್ಲದೆ ಯಾವನಾದರೂ ಪ್ರವೀಣತೆಗಾಗಿ ಹೋರಾಡುವಾಗ ನಿಯಮದ ಪ್ರಕಾರ ಹೋರಾಡ ದಿದ್ದರೆ ಅವನಿಗೆ ಕಿರೀಟ ದೊರೆಯುವದಿಲ್ಲ. 6 ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯ ದಾಗಿ ಪಾಲುಗಾರನಾಗಿರತಕ್ಕದ್ದು. 7 ನಾನು ಹೇಳುವ ದನ್ನು ಯೋಚಿಸು; ಕರ್ತನು ಎಲ್ಲಾದರಲ್ಲೂ ನಿನಗೆ ವಿವೇಕವನ್ನು ದಯಾಪಾಲಿಸಲಿ. 8 ನನ್ನ ಸುವಾರ್ತೆಗನು ಸಾರವಾಗಿ ದಾವೀದನ ವಂಶದವನಾಗಿರುವ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂದು ಜ್ಞಾಪಕ ಮಾಡಿಕೋ. 9 ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾ ಗಿದ್ದೇನೆ; ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ. 10 ಆದ ಕಾರಣ (ದೇವರು) ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯಪ್ರಭಾವ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ತಾಳಿಕೊಳ್ಳುತ್ತೇನೆ. 11 ಇದು ನಂಬತಕ್ಕ ದ್ದಾಗಿದೆ, ಏನೆಂದರೆ--ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ನಾವು ಸಹ ಜೀವಿಸುವೆವು. 12 ನಾವು ಬಾಧೆಪಡುವವರಾಗಿದ್ದರೆ ಆತನೊಂದಿಗೆ ನಾವು ಸಹ ಆಳುವೆವು; ಆತನನ್ನು ಅಲ್ಲಗಳೆದರೆ ಆತನು ಸಹ ನಮ್ಮನ್ನು ಅಲ್ಲಗಳೆಯುವನು. 13 ನಾವು ಅಪನಂಬಿಕೆ ಯುಳ್ಳವರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು; ಆತನು ತನ್ನನ್ನು ತಾನು ಅಲ್ಲಗಳೆಯಲಾರನು. 14 ಈ ವಿಷಯಗಳನ್ನು ಅವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವದೇ ಹೊರತು ಯಾವ ಪ್ರಯೋಜನಕ್ಕೂಬಾರದ ವಾಗ್ವಾದಗಳನ್ನು ಮಾಡಬಾರದೆಂದು ಅವರಿಗೆ ಕರ್ತನ ಮುಂದೆ ಖಂಡಿತ ವಾಗಿ ಹೇಳು. 15 ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಅಭ್ಯಾಸಿಸು. ಅವಮಾನಕ್ಕೆ ಗುರಿ ಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ವಿಭಾಗಿಸುವವನೂ ಆಗಿರು. 16 ಆದರೆ ಅಶುದ್ಧವಾದ ಹರಟೆಮಾತುಗಳನ್ನು ನಿರಾಕರಿಸು; ಅವುಗಳಿಂದ ಹೆಚ್ಚೆಚ್ಚಾಗಿ ಭಕ್ತಿಹೀನತೆಯು ಉಂಟಾಗುವದು. 17 ಅವರ ಮಾತು ವ್ರಣವ್ಯಾಧಿಯಂತೆ ತಿನ್ನುವದು; ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ; 18 ಅವರು ಪುನರುತ್ಥಾನವು ಆಗಲೇ ಆಗಿಹೋಯಿ ತೆಂದು ಹೇಳುತ್ತಾ ಸತ್ಯಭ್ರಷ್ಠರಾಗಿ ಕೆಲವರ ನಂಬಿಕೆ ಯನ್ನು ಕೆಡಿಸುವವರಾಗಿದ್ದಾರೆ. 19 ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು. 20 ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಕೆಲವು ಗೌರವಕ್ಕೂ ಕೆಲವು ಅಗೌರವಕ್ಕೂ ಇರುತ್ತವೆ. 21 ಒಬ್ಬನು ತನ್ನನ್ನು ಇಂಥವುಗಳಿಂದ ಶುದ್ಧಪಡಿಸಿಕೊಂಡರೆ ಅವನು ಪ್ರತಿಷ್ಠಿತನೂ ಯಜಮಾನನ ಬಳಿಕೆಗೆ ಯೋಗ್ಯನೂ ಸಕಲಸತ್ಕಾರ್ಯಕ್ಕೆ ಸಿದ್ಧನೂ ಆಗಿದ್ದು ಗೌರವಕ್ಕೆ ಪಾತ್ರೆಯಾಗಿರುವನು. 22 ಯೌವನದ ಇಚ್ಚೆಗಳಿಂದ ಸಹ ಓಡಿಹೋಗು; ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳು ವವರ ಸಂಗಡ ನೀತಿ ವಿಶ್ವಾಸ ಪ್ರೀತಿ ಸಮಾಧಾನ ಇವುಗಳನ್ನು ಅನುಸರಿಸು. 23 ಮೂಢರ ಬುದ್ಧಿಯಿಲ್ಲದ ವಿಚಾರಗಳು ಜಗಳಗಳಿಗೆ ಕಾರಣವಾಗಿವೆ ಎಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ. 24 ಕರ್ತನ ಸೇವ ಕನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ತಾಳ್ಮೆಯುಳ್ಳವನೂ ಆಗಿರಬೇಕು. 25 ಎದುರಿಸುವವರನ್ನು ಸಾತ್ವಿಕತ್ವದಿಂದ ತಿದ್ದುವವನು ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರಲ್ಲಿ ಪಶ್ಚಾತ್ತಾಪವನ್ನುಂಟುಮಾಡಿ ಸತ್ಯದ ತಿಳುವಳಿಕೆಯನ್ನು ಅವರಿಗೆ ಕೊಟ್ಟಾನು. 26 ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.

3

1 ಆದರೆ ಕಡೇ ದಿವಸಗಳಲ್ಲಿ ಅಪಾಯಕರ ವಾದ ಕಾಲಗಳು ಬರುವವೆಂಬದನ್ನು ಸಹ ತಿಳಿದುಕೋ. 2 ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿ ಕೊಳ್ಳುವವರೂ ಲೋಭಿಗಳೂ ಬಡಾಯಿ ಕೊಚ್ಚುವ ವರೂ ಅಹಂಕಾರಿಗಳೂ ದೇವದೂಷಕರೂ ತಂದೆ ತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ಅಶುದ್ಧರೂ 3 ಸ್ವಾಭಾವಿಕವಾದ ಮಮತೆಯಿಲ್ಲದವರೂ ಒಪ್ಪಂದವನ್ನು ಮುರಿಯುವವರೂ ಸುಳ್ಳಾಗಿ ದೂರು ವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯವರನ್ನೂ ಹೀನೈಸುವವರೂ 4 ದ್ರೋಹಿಗಳೂ ದುಡಿಕಿನವರೂ ಉಬ್ಬಿಕೊಂಡವರೂ ದೇವರಿಗಿಂತ ಹೆಚ್ಚಾಗಿ ಭೋಗಗಳನ್ನೇ ಪ್ರೀತಿಸುವವರೂ 5 ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು; ಇಂಥವರಿಂದ ಪ್ರತ್ಯೇಕವಾಗಿರು. 6 ಮನೆ ಗಳಲ್ಲಿ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ನಡಿಸಲ್ಪಟ್ಟವರೂ ಆಗಿರುವ ಅವಿವೇಕಿಗಳಾದ ಸ್ತ್ರೀಯರನ್ನು ವಶಮಾಡಿಕೊಳ್ಳು ವವರೂ ಇವರೊಳಗೆ ಸೇರಿದವರೇ. 7 ಇವರು ಯಾವಾಗಲೂ ಕಲಿಯುತ್ತಿದ್ದರೂ ಸತ್ಯದ ಪರಿಜ್ಞಾನ ವನ್ನು ಹೊಂದಲಾರದವರು. 8 ಯನ್ನಯಂಬ್ರ ಎಂಬ ವರು ಮೋಶೆಯನ್ನು ವಿರೋಧಿಸಿದಂತೆಯೇ ಇವರು ಸಹ ಸತ್ಯವನ್ನು ವಿರೋಧಿಸುತ್ತಾರೆ; ಇದಲ್ಲದೆ ಇವರು ಬುದ್ಧಿಗೆಟ್ಟವರೂ ಭ್ರಷ್ಟರೂ ಆಗಿದ್ದಾರೆ. 9 ಆದರೆ ಇವರು ಇನ್ನು ಮುಂದುವರಿಯಲಾರರು; ಈ ಯನ್ನ ಯಂಬ್ರರ ಮೂರ್ಖತನವು ಎಲ್ಲರಿಗೂ ಪರಿಷ್ಕಾರವಾಗಿ ತಿಳಿದು ಬಂದ ಪ್ರಕಾರ ಇವರದೂ ತಿಳಿದುಬರುವದು. 10 ನೀನಾದರೋ ನನ್ನ ಬೋಧನೆ ನಡತೆ ಉದ್ದೇಶ ನಂಬಿಕೆ ದೀರ್ಘ ಶಾಂತಿ ಪ್ರೀತಿ ಸೈರಣೆ ಇವುಗಳನೂ 11 ಅಂತಿಯೋಕ್ಯ ಇಕೋನ್ಯ ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ ಕಷ್ಟಾನುಭವಗಳನ್ನೂ ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನೆಂಬ ದನ್ನೂ ನೀನು ಪೂರ್ಣವಾಗಿ ತಿಳಿದವನಾಗಿದ್ದೀ. ಆದರೆ ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು. 12 ಹೌದು, ಕ್ರಿಸ್ತ ಯೇಸುವಿನಲ್ಲಿ ಭಕ್ತಿ ಯುಳ್ಳವರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವ ರೆಲ್ಲರೂ ಹಿಂಸೆಗೊಳಗಾಗುವರು. 13 ಆದರೆ ದುಷ್ಟರೂ ವಂಚಕರೂ ಮೋಸಮಾಡುತ್ತಾ ತಾವೇ ಮೋಸ ಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು. 14 ನೀನಾದರೋ ಕಲಿತು ದೃಢವಾಗಿ ನಂಬಿದವುಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು. 15 ಚಿಕ್ಕಂದಿನಿಂದಲೂ ನೀನು ಪರಿಶುದ ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ. 16 ಬರಹಗಳನ್ನು ತಿಳಿದವನಾಗಿದ್ದೀಯಲ್ಲಾ; ಆ ಬರಹಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆ ಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ. 17 ಆದದರಿಂದ ದೇವರ ಮನುಷ್ಯನು ಪರಿಪೂರ್ಣ ನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.

4

1 ಆದದರಿಂದ ದೇವರ ಮುಂದೆಯೂ ಆತನ ಬರೋಣದಲ್ಲಿ ಮತ್ತು ಆತನ ರಾಜ್ಯ ದಲ್ಲಿ ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವ ಕರ್ತನಾದ ಯೇಸು ಕ್ರಿಸ್ತನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ-- 2 ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತ ನಾಗಿರು; ಪೂರ್ಣದೀರ್ಘಶಾಂತಿಯಿಂದಲೂ ಉಪ ದೇಶದಿಂದಲೂ ಖಂಡಿಸು, ಗದರಿಸು, ಎಚ್ಚರಿಸು. 3 ಯಾಕಂದರೆ ಜನರು ಸ್ವಸ್ಥಬೋಧನೆಯನ್ನು ಸಹಿಸ ಲಾರದ ಕಾಲವು ಬರುತ್ತದೆ; ಅದರಲ್ಲಿ ಅವರು ತೀಟೇ ಕಿವಿಯುಳ್ಳವರಾಗಿ ತಮ್ಮ ದುರಾಶೆಗಳಿಗೆ ಅನುಕೂಲ ವಾದ ಉಪದೇಶಕರನ್ನು ಇಟ್ಟುಕೊಳ್ಳುವರು. 4 ಅವರು ಸತ್ಯಕ್ಕೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ತಿರುಗಿಕೊಳ್ಳುವರು. 5 ಆದರೆ ನೀನು ಎಲ್ಲಾ ವಿಷಯ ಗಳಲ್ಲಿ ಎಚ್ಚರವಾಗಿರು, ಶ್ರಮೆಗಳನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನ್ನ ಸೇವೆಯನ್ನು ಸಂಪೂರ್ಣ ಮಾಡು. 6 ನಾನು ಈಗ ಅರ್ಪಿತನಾಗು ವದಕ್ಕೆ ಸಿದ್ಧನಿದ್ದೇನೆ; ನಾನು ಹೊರಟು ಹೋಗಬೇಕಾದ ಸಮಯವು ಸವಿಾಪವಾಗಿದೆ. 7 ನಾನು ಒಳ್ಳೇ ಹೋರಾಟವನ್ನು ಹೋರಾಡಿದ್ದೇನೆ, ನಾನು ನನ್ನ ಓಟ ವನ್ನು ಮುಗಿಸಿದ್ದೇನೆ, ನಾನು ನಂಬಿಕೆಯನ್ನು ಕಾಪಾಡಿ ದ್ದೇನೆ. 8 ಇನ್ನು ಮುಂದೆ ನನಗೋಸ್ಕರ ನೀತಿಯ ಕಿರೀಟವು ಇಡಲ್ಪಟ್ಟಿದೆ; ಅದನ್ನು ನೀತಿಯುಳ್ಳ ನ್ಯಾಯಾ ಧಿಪತಿಯಾದ ಕರ್ತನು ಆ ದಿನದಲ್ಲಿ ನನಗೆ ಕೊಡು ವನು; ನನಗೆ ಮಾತ್ರವಲ್ಲದೆ ಆತನ ಬರೋಣವನ್ನು ಪ್ರೀತಿಸುವವರೆಲ್ಲರಿಗೆ ಸಹ ಕೊಡುವನು. 9 ನನ್ನ ಬಳಿಗೆ ಬೇಗ ಬರುವದಕ್ಕೆ ನೀನು ಪ್ರಯತ್ನ ಮಾಡು; 10 ಯಾಕಂದರೆ ದೇಮನು ಇಹಲೋಕವನ್ನು ಪ್ರೀತಿಸಿ ನನ್ನನ್ನು ತೊರೆದುಬಿಟ್ಟು ಥೆಸಲೋನಿಕಕ್ಕೆ ಹೋದನು; ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು; 11 ಲೂಕನು ಮಾತ್ರ ನನ್ನ ಜೊತೆಯಲ್ಲಿ ದ್ದಾನೆ. ಮಾರ್ಕನನ್ನು ಸಂಗಡ ಕರಕೊಂಡು ಬಾ, ಅವನು ಸೇವೆಗಾಗಿ ನನಗೆ ಉಪಯುಕ್ತನಾಗಿದ್ದಾನೆ. 12 ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. 13 ತ್ರೋವ ದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟುಬಂದ ಮೇಲಂಗಿ ಯನ್ನೂ ಪುಸ್ತಕಗಳನ್ನೂ ಮುಖ್ಯವಾಗಿ ಚರ್ಮದ ಕಾಗದ ಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ. 14 ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು; ಕರ್ತನು ಅವನ ಕೃತ್ಯಗಳಿಗೆ ಸರಿ ಯಾಗಿ ಅವನಿಗೆ ಪ್ರತಿಫಲವನ್ನು ಕೊಡುವನು. 15 ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು; ಯಾಕಂದರೆ ಅವನು ನಮ್ಮ ಮಾತುಗಳನ್ನು ಬಹಳ ವಾಗಿ ಎದುರಿಸಿದನು. 16 ನಾನು ಮೊದಲನೆಯ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನೊಂದಿಗೆ ನಿಲ್ಲಲಿಲ್ಲ. ಎಲ್ಲರೂ ನನ್ನನ್ನು ತೊರೆದುಬಿಟ್ಟರು; ಇದು ಅವರ ಲೆಕ್ಕಕ್ಕೆ ಸೇರಿಸಲ್ಪಡದೆ ಇರಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ. 17 ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸಾರಲ್ಪಡುವದು ಸಂಪೂರ್ಣವಾಗಿ ಗ್ರಹಿಕೆ ಯಾಗುವಂತೆಯೂ ಅನ್ಯಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು; ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು. 18 ನನ್ನನ್ನು ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ತಪ್ಪಿಸಿ ತನ್ನ ಪರಲೋಕರಾಜ್ಯಕ್ಕೆ ನನ್ನನ್ನು ಕಾಪಾಡು ವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ. ಆಮೆನ್‌. 19 ಪ್ರಿಸ್ಕಳಿಗೂ ಅಕ್ವಿಲ್ಲನಿಗೂ ಒನೆಸಿಫೊರನ ಮನೆಯ ವರಿಗೂ ವಂದನೆ. 20 ಎರಸ್ತನು ಕೊರಿಂಥದಲ್ಲಿ ನಿಂತನು. ಆದರೆ ತ್ರೊಫಿಮನು ಅಸೌಖ್ಯವಾಗಿದ್ದದರಿಂದ ಅವ ನನ್ನು ನಾನು ಮಿಲೇತದಲ್ಲಿ ಬಿಟ್ಟೆನು. 21 ಚಳಿಗಾಲಕ್ಕೆ ಮುಂಚೆಯೇ ಬರುವದಕ್ಕೆ ಪ್ರಯತ್ನ ಮಾಡು. ಯುಬೂ ಲನೂ ಪೂದೆಯನೂ ಲೀನನೂ ಕ್ಲೌದ್ಯಳೂ ಎಲ್ಲಾ ಸಹೋದರರೂ ನಿನಗೆ ವಂದನೆ ಹೇಳುತ್ತಾರೆ. 22 ಕರ್ತನಾದ ಯೇಸು ಕ್ರಿಸ್ತನು ನಿನ್ನ ಆತ್ಮದ ಸಂಗಡ ಇರಲಿ. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್‌.